ಫಾಕ್‍ಲೆಂಡ್ ಆಶ್ರಿತ ದ್ವೀಪಗಳು - 
ದಕ್ಷಿಣ ಜಾರ್ಜಿಯ ದ್ವೀಪ, ದಕ್ಷಿಣ ಸ್ಯಾಂಡ್‍ವಿಚ್ ದ್ವೀಪಗಳು ಹಾಗೂ ಇತರ ಹಲವು ಕಿರು ದ್ವೀಪಗಳು. ದಕ್ಷಿಣ ಜಾರ್ಜಿಯ ದ್ವೀಪದ ವಿಸ್ತೀರ್ಣ 3,592 ಚ. ಕಿಮೀ. ದಕ್ಷಿಣ ಸ್ಯಾಂಡ್‍ವಿಚ್ ದ್ವೀಪ 311 ಚ ಕಿಮೀ ವಿಸ್ತಾರವಾಗಿದೆ. ಎಲ್ಲ ದ್ವೀಪಗಳ ಒಟ್ಟು ವಿಸ್ತೀರ್ಣ 4,066 ಚ. ಕಿಮೀ. ಈ ದ್ವೀಪಗಳು ತಿಮಿಂಗಲ ಬೇಟೆಯ ಕೇಂದ್ರಗಳು. ಇವುಗಳ ಆಡಳಿತ ಫಾಕ್‍ಲೆಂಡ್ ದ್ವೀಪಗಳ ಸರ್ಕಾರಕ್ಕೆ ಸೇರಿದೆ. ಈ ದ್ವೀಪಗಳಲ್ಲಿ ಖಾಯಂಜನವಾಸವಿಲ್ಲ. 22 ಮಂದಿ ವಿಜ್ಞಾನಿಗಳ ತಂಡ ಹಾಗೂ ಬ್ರಿಟಿಷ್ ಆಂಟಾರ್ಕ್‍ಟಿಕ್ ಸರ್ವೇಕ್ಷಣ ಸಿಬ್ಬಂದಿ ಠಾಣಾ ದಕ್ಷಿಣ ಜಾರ್ಜಿಯ ದ್ವೀಪದ ಕಿಂಗ್ ಎಡ್ವರ್ಡ್ ಪಾಯಿಂಟ್ ಎಂಬಲ್ಲಿವೆ. ದಕ್ಷಿಣ ಸ್ಯಾಂಡಿವಿಚ್ ದ್ವೀಪ ನಿರ್ಜನ. 
	(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ